15th June, 2023, 9.00 am
ನಮ್ಮ ಮುಖ್ಯ ಮಂತ್ರಿಯಾದ ಶ್ರೀ ಸಿದ್ದರಾಮಯ್ಯ ರವರ ಆಡಳಿತದಲ್ಲಿ ಕರ್ನಾಟಕ ಸರ್ಕಾರ ಹೆಣ್ಣು ಮಕ್ಕಳಿಗೆ ಉಚಿತವಾಗಿ BMTC ಮತ್ತಿತರ ಬಸ್ ಗಳಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿರುವುದಂತು ಸತ್ಯ. ಆದರೆ, ಈ ದಿನ, Route no.225B ಬಸ್ ನಲ್ಲಿ ಮಹಿಳೆಯೊಬ್ಬರೂ ಅವರ ಮೊಬೈಲಿನಲ್ಲಿ ಇದ್ದ ID card ನ್ನು bus conductor ಗೆ ತೋರಿಸುವಾಗ ID card ನ ಮೇಲಿದ್ದ ಮಾಹಿತಿ ಖಚಿತ ಪಡಿಸಿಕೊಳ್ಳಲು conductor ಸಾಹೇಬರು zoom ಮಾಡಿ ಮಾಡಿ ನೋಡಿದರೆಂದು ಬೆಳ್ಳಂಬೆಳಿಗ್ಗೆ ಸುಮಾರು 9.00 ಘಂಟೆಯಲ್ಲಿ ಜೋರು ಗಲಾಟೆಯಾಯಿತು. ಮೇಡಂ ರವರು Dpt. of Education ನಲ್ಲಿ ಕರ್ತವ್ಯ ನಿರ್ವಹಿಸುವವರು. ಕುತ್ತಿಗೆಗೆ ಇಲಾಖೆಯ ID card ಹಾಕಿದ್ರು. ಸರ್ಕಾರಿ ನೌಕರರು, ಮೇಲಾಗಿ ವೃತ್ತಿಯಲ್ಲಿ ಟೀಚರ್ರು. ಕೇಳಬೇಕೇ? ಮೊಬೈಲಿನಲ್ಲಿದ್ದ ID cardನ್ನು zoom ಮಾಡಿ ಮಾಡಿ ನೋಡಿದರೆಂದು sentimental ಆಗಿ, conductor ಮತ್ತು ಮೇಡಂ ಇಬ್ಬರೂ mental ತರ ಆಡ್ತಾ ಇದ್ದರು.
ಮೇಡಂರವರು, ನನಗೆ ರೂ. 15/- ಕೊಟ್ಟು, ಟಿಕೆಟ್ ತಗೊಳೊಕ್ಕೆ ಯೋಗ್ಯತೆ ಇಲ್ಲವೇನು? ನಾನು ಸರ್ಕಾರಿ ನೌಕರಳು! ನನ್ನನ್ನು ಕಳ್ಳನ ತರಹ ನೋಡ್ತಾರಲ್ಲಾ. ನಾವೇನು ಸುಳ್ಳು ಹೇಳ್ತಿವೇನು ? ಅಂತ ಬಹಳ ಬೇಜಾರು ಮಾಡಿಕೊಂಡು, conductor ನ ಬೈದಿದ್ದಲ್ಲದೇ ಅವರ ಹೆಂಡತಿಗೂ ಸಹ ಬೈದದ್ದಾಯ್ತು! ಇವರಿಬ್ಬರ ಜೋರು ತರ್ಕ, ಪ್ರಯಾಣಿಕರಿಗೆ ಸಿಟ್ಟು ಬಂದಿತ್ತು. ಅಲ್ಲಿದ್ದ ಗಂಡಸರು, conductor ಸಾಹೇಬರಿಗೆ, ಹೋಗಲಿ ಬಿಡಿ ಸರ್ ಅಂತ ಹೇಳಿದ್ರೆ, ಇನ್ನು ಅಲ್ಲೇ ಇಬ್ಬರೂ ಕಾಲೇಜಿಗೆ ಹೋಗುವ ಹುಡುಗಿಯರು, ಹೋಗ್ಲಿ ಬಿಡಿ ಮೇಡಂ ಅಂತ ಇಬ್ಬರನ್ನೂ ಸಮಾಧಾನ ಮಾಡುವಾಗ; conductorರವರು ನಾವೇನೂ ನಮ್ಮ ಕೆಲಸ ಮಾಡೋದು ಬೇಡ್ವೇನಪ್ಪ ಅಂತ ಎಲ್ಲರನ್ನು ಜೋರಾಗಿ ಒಮ್ಮೆ, ವಾಪಸ್ಸು ಬೈದದ್ದಾಯ್ತು. ಅವರು ಹೇಳುವುದರಲ್ಲೂ ಸತ್ಯ ಇದೆ. ಆದರೆ, ನಮ್ಮ ಟೀಚರ್ ರವರು ಬಿಡದಂಗೆ conductor ನ ಬೈತಾನೆ ಇದ್ರೂ ಸ್ವಾಮಿ. ದೇವರು ವರ ಕೊಟ್ರು ಪೂಜಾರಿ ವರ ಕೊಡಲ್ಲ! ಅಂತ ನಮ್ಮ conductorಗೆ ಮಂಗಳಾರತಿ ಬೇರೆ ಮಾಡಿದ್ರು!
ಒಟ್ಟಿನಲ್ಲಿ ನಮ್ಮ ಹೆಣ್ಣು ಮಕ್ಕಳು ಎಂದಿಗೂ ಸೋಲು ಒಪ್ಪಿಕೊಳ್ಳೋದಿಲ್ಲ. ತುಂಬಾ ಸೂಕ್ಷ್ಮ! ಪ್ರತಿಯೊಂದು ಮಾತನ್ನೂ, ನಡತೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸುವ ಹೆಣ್ಣು ಜಾತಿ ನಮ್ಮದು! ಮೇಡಂ ರವರು, ಅವರು ಇವರಿಗೆ, insult ಮಾಡಿದ್ರೂ ಅಂತ ಇಷ್ಟೆಲ್ಲಾ ಮಾತು-ಕಥೆ ಆದದ್ದು. ಈಗಿನ ಕಾಲದ ಸಿಟ್ಟಲ್ಲಾ ಇದು! ಯುಗ-ಯುಗದಿಂದ ನಮ್ಮನ್ನು ಸುಮ್ಮನಿರಿಸುತ್ತಾ ಬಂದಿರುವ ಸಮಾಜ, ಈಗ ಒಂದು ಹೆಣ್ಣಿಗೆ, ಸುಮ್ಮನೆ, ತಮಾಷೆಗೂ ಏನೂ ಹೇಳುವ ಹಾಗಿಲ್ಲ. ನಿಮ್ಮ ಮೇಲೆ ಎರಗಿ ಬೀಳುತ್ತಾರೆ. The tables have turned and we will not allow the slightest of insult and justice to every word is seeked. ಹುಶಾರು! ಜೈ ಮಾರಿಕಾಂಬೆ!
ಈ ತರ್ಕದ ಮಧ್ಯೆ, ನಾನು ಸಹ ಮೇಡಂಗೆ: ಮೇಡಂ, ಹೋಗ್ಲಿ ಬಿಡಿ ಅಂತ ಹೇಳಿದೆ. ಮತ್ತೇನೂ ಮಾತಾಡಲಿಲ್ಲ. ಭಯ ನನಗೆ, ನಾನುನು ಸರ್ಕಾರಿ ನೌಕರಳಲ್ವಾ! ಆಮೇಲೆ, ನೀವು ಸುಮ್ಮನೇನೆ ನಿಂತಿದಿರ, ಅಂತ ನನ್ನನ್ನು ಅವರ ಜಗಳದೊಳಗೆ ಎಳೆದಾರು ಅಂತ, ಅಷ್ಟ ನ್ನು ಹೇಳಿ ಸುಮ್ಮನಾಗ್ಬಿಟ್ಟೆ. Most definitely, ಮೇಡಂ ಮನೆ ಇಂದ ಹೊರಡುವಾಗ, ಯಾರಿಗೋ ತಕ್ಕ ಶಾಸ್ತಿ ಮಾಡಿ, ಬಸ್ ಹತ್ತಿದ್ದಂತ ಕಾಣ್ತಿತ್ತು! ಮೇಡಂ ಮಾತ್ರ ಮಾತನ್ನೂ ಮುಂದುವರಿಸ್ತಲೇ ಇದ್ರು, conductor ಸಾಹೇಬರ BP ಹೆಚ್ಚಾಗ್ತಲೇ ಇತ್ತು. ನನ್ನ ಸ್ಟಾಪ್ ಬಂತು, ಬಸ್ ಇಳಿದು, ಮೆಟ್ರೊ ಸ್ಟೇಶನ್ ಕಡೆಗೆ ಹೊರಟೆ.
ಮೇಡಂ ಮತ್ತೆ ಮೆಟ್ರೊ ನಲ್ಲಿ ಸಿಕ್ಕಿದ್ರು. ಕೋಪ ತಣ್ಣಗಿರುವ ಹಾಗೆ ಕಾಣ್ತು. ಆಗ ಮೇಡಂಗೆ ಹೇಳಿದೆ. ಮೇಡಂ ಇವೆಲ್ಲಾ irrelevant things: he (conductor)zooming your ID card on the mobile, was to confirm your identity and he was simply doing his job or may be he had vision issues and hence he must have been zooming and you got emotional. It's ok and for such simple things, you should let it go. ಆದರೂ ಇನ್ನು conductorನ್ನು ಬೈತಾನೆ ಇದ್ದರು, ನಾನು, ಇನ್ನೂ ಏನೂ ಹೇಳೋದಕ್ಕಾಗಲ್ಲ ಅಂತ ಸುಮ್ಮನಾದೆ.
Comments
Post a Comment