15th June, 2023, 9.00 am ನಮ್ಮ ಮುಖ್ಯ ಮಂತ್ರಿಯಾದ ಶ್ರೀ ಸಿದ್ದರಾಮಯ್ಯ ರವರ ಆಡಳಿತದಲ್ಲಿ ಕರ್ನಾಟಕ ಸರ್ಕಾರ ಹೆಣ್ಣು ಮಕ್ಕಳಿಗೆ ಉಚಿತವಾಗಿ BMTC ಮತ್ತಿತರ ಬಸ್ ಗಳಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿರುವುದಂತು ಸತ್ಯ. ಆದರೆ, ಈ ದಿನ, Route no.225B ಬಸ್ ನಲ್ಲಿ ಮಹಿಳೆಯೊಬ್ಬರೂ ಅವರ ಮೊಬೈಲಿನಲ್ಲಿ ಇದ್ದ ID card ನ್ನು bus conductor ಗೆ ತೋರಿಸುವಾಗ ID card ನ ಮೇಲಿದ್ದ ಮಾಹಿತಿ ಖಚಿತ ಪಡಿಸಿಕೊಳ್ಳಲು conductor ಸಾಹೇಬರು zoom ಮಾಡಿ ಮಾಡಿ ನೋಡಿದರೆಂದು ಬೆಳ್ಳಂಬೆಳಿಗ್ಗೆ ಸುಮಾರು 9.00 ಘಂಟೆಯಲ್ಲಿ ಜೋರು ಗಲಾಟೆಯಾಯಿತು. ಮೇಡಂ ರವರು Dpt. of Education ನಲ್ಲಿ ಕರ್ತವ್ಯ ನಿರ್ವಹಿಸುವವರು. ಕುತ್ತಿಗೆಗೆ ಇಲಾಖೆಯ ID card ಹಾಕಿದ್ರು. ಸರ್ಕಾರಿ ನೌಕರರು, ಮೇಲಾಗಿ ವೃತ್ತಿಯಲ್ಲಿ ಟೀಚರ್ರು. ಕೇಳಬೇಕೇ? ಮೊಬೈಲಿನಲ್ಲಿದ್ದ ID cardನ್ನು zoom ಮಾಡಿ ಮಾಡಿ ನೋಡಿದರೆಂದು sentimental ಆಗಿ, conductor ಮತ್ತು ಮೇಡಂ ಇಬ್ಬರೂ mental ತರ ಆಡ್ತಾ ಇದ್ದರು. ಮೇಡಂರವರು, ನನಗೆ ರೂ. 15/- ಕೊಟ್ಟು, ಟಿಕೆಟ್ ತಗೊಳೊಕ್ಕೆ ಯೋಗ್ಯತೆ ಇಲ್ಲವೇನು? ನಾನು ಸರ್ಕಾರಿ ನೌಕರಳು! ನನ್ನನ್ನು ಕಳ್ಳನ ತರಹ ನೋಡ್ತಾರಲ್ಲಾ. ನಾವೇನು ಸುಳ್ಳು ಹೇಳ್ತಿವೇನು ? ಅಂತ ಬಹಳ ಬೇಜಾರು ಮಾಡಿಕೊಂಡು, conductor ನ ಬೈದಿದ್ದಲ್ಲದೇ ಅವರ ಹೆಂಡತಿಗೂ ಸಹ ಬೈದದ್ದಾಯ್ತು! ಇವರಿಬ್ಬರ ಜೋರು ತರ್ಕ, ಪ್ರಯಾಣಿಕರಿಗೆ ಸಿಟ್ಟು ಬ...
Posts
Showing posts from June, 2023