ಬಿರುಗಾಳಿ
ಗಾಳಿ,
ತೂರು ನೀ,
ತೂರಾಡು
ನೀ,
ಎಳೆದೆತ್ತುಕೊಂಡು
ಹೋಗು, ನನ್ನ ನೀ,
ದೂರ,
ದೂರ, ಬಲು ದೂರ, ಎಸೆ, ನನ್ನ ನೀ,
ಮನ
ಬಂದಂತೆ ಮಾಡು ನೀ!
ನೀ
ನನ್ನ, ಬೆಸೆದು, ಬಿಗಿದು, ಹರಿದು, ನನ್ನ, ಒಮ್ಮೆಲೆ, ತೊರೆ ನೀ,
ಮತ್ತುಡಕದಿರು,
ನನ್ನ ನೀ,
ನೀನಿಂದಿಲ್ಲಿರುವೆ,
ನಾಳೆಲ್ಲೋ ಇರುವೆ,
ನೀನ್ಯಾರೋ,
ನಾನ್ಯಾರೋ,
ಬಿಡು!
ಬಿಟ್ಟು ಬಿಡು, ಸಂಪೂರ್ಣವಾಗಿ ನನ್ನ ನೀ!
Comments
Post a Comment